ಬೇ ಅವ್ವ.. 🥺❤
ನಿನ್ನ ಋಣ ತೀರಿಸೋಕೆ
ಸಾಧ್ಯ ಅದ ಅನ್ಕೊಂಡಿ ಏನ್ ಬೇ..!
ಹೆಂಗರ ತಿಳ್ಕೊಂಡಿ ಬೇ ಯವ್ವ
ಸಮುದ್ರದ ನೀರು ಖಾಲಿ ಆಗುತ್ತೇನು?
ನೀಲಿ ಆಕಾಶನ ಮಡಚೋಕೆ ಆಗತ್ತೇನು?
ಭೂಮಿ ತಾಯಿ ತಾಳ್ಮೆ ಮೀರಿಸೋಕೆ ಸಾದ್ಯ ಏನು?
ಅದೆಲ್ಲ ಸಾಧ್ಯ ಅಂದ ಮ್ಯಾಲ
ಅವೆರಡಕ್ಕೂ ಮಿಗಿಲಾದ ಪ್ರೀತಿ ಕೊಟ್ಟು,
ಚಿಕ್ಕವ ಇದ್ದಾಗ ಕೈ ತುತ್ತು ಕೊಟ್ಟು,
ಇಡೀ ಜೀವನಕ್ಕೆ ಆಗುವಷ್ಟು ನೆನಪು ಕೊಟ್ಟು
ನನ್ನ ಬಿಟ್ಟು ಹೋದರೂ ನನ್ನ ಜೊತೆ ಇರುವ
ನಿನ್ನ ಋಣ ತೀರಿಸೋಕೆ ಹೆಂಗ್ ಸಾಧ್ಯ ಬೇ..! 🥺❤
Comments
Post a Comment