ಹೇ! ಹುಡುಗಿ ನೀ ಹೀಗೆ ಕಾಡದಿರು!🤗

 ಹೇ! ಹುಡುಗಿ ನೀ ಹೀಗೆ ಕಾಡದಿರು, 

ನೀ ಮುಂಗುರುಳ ಸರಿಸಿ

ನನ್ನನ್ನು ಬಂಧಿಸಿಬಿಡು

ಆಗಲಾದರೂ ನಿನ್ನ ಮುಂಗುರುಳ 

ಬಂಧನದಲ್ಲಿ ಬೆಚ್ಚಗಿರುವೆ.. ! 


ಹೇ! ಹುಡುಗಿ ನೀ ಹೀಗೆ  ಕಾಡದಿರು, 

ನಿನ್ನ ಮೂಗಿನ ಮೂಗುತಿಯ

ಮೇಲೆಯೇ ನನಗೂ ಜಾಗ ಕೊಡು

ಸಂತಸದಿ ನಿನ್ನಂದವನ್ನೇ ಬಲು ಸೋಜಿಗವಾಗಿ

ಗಮನಿಸುತ ನಿನ್ನಂದವ ಕಾಯುವೆ... ! 


ಹೇ! ಹುಡುಗಿ ನೀ ಹೀಗೆ ಕಾಡದಿರು, 

ನಿನ್ನ ಕೆಂದುಟಿಗಳನ್ನು ಒಮ್ಮೆ ಅರಳಿಸಿ

ದಾಳಿಂಬೆಯ ಹಲ್ಲುಗಳ ತೋರಿಬಿಡು

ಸದಾ ನಿನ್ನ ನಲ್ಮೆಯ ಕಿರು ನಗೆಯನು

ನೋಡುತಲೆ ಇಡೀ ಜೀವನ ಸವೆಸಿಬಿಡುವೆ..! 


Mahadev nayak

Comments

Popular posts from this blog

ಭಾವಕುಸುಮೆ ನನ್ನವ್ವ..🥺❤

ಭಾವನೆ ಅರಿಯದ ಬೆಡಗಿಯರು.. 😌