ಭಾವನೆ ಅರಿಯದ ಬೆಡಗಿಯರು.. 😌

ಮನದ ಆಸೆಗಳೇನೋ ಸಾವಿರಾರು

ಆದರೆ ನನಗೆ ಗತಿಯಾಗಿದೆ ಸಖಿ ಸಿಗದ ಊರು

ಭವದ ಭಾವನೆಗಳು ಚಿಮ್ಮುತಿವೆ ನೂರು

ಆದರೆ ನನಗೆ ಸಿಕ್ಕಿದ್ದು ಸಖಿ ಸಿಗದ ಊರು, 


ಅರೆ ಯಾಕೆ ಹೀಗೆ ಈ ಹುಡುಗಿಯರು

ಅವರಿಗಾಗಿ ಕಾದವರಿಗೆ ಎಂದಿಗೂ ಸಿಗರು, 

ಬಣ್ಣ ಬಣ್ಣದ ಮಾತುಗಳಿಗೆ ಮಾತ್ರ

ಒಂದವಕಾಶ ನೀಡಿ ಸೋತು ಹೋಗುವರು..! 


ಮುಗುಳುನಗೆಯ ಮೌನದ ಸಂಭಾಷಣೆ

 ಮನದ ಒಳಗಿನ ಪ್ರೀತಿಯ ಅರಿಯರು, 

ಬದಲಿಗೆ ಆನ್ಲೈನ್ ಸಂದೇಶಗಳ 

ಪ್ರೀತಿಗೆ ಬಲು ಬೇಗ ಆಕರ್ಷಿತರಾಗುವರು..! 


ಮನದ ಒಳಗಿನ ಒಲುಮೆಯ ಮಾತುಗಳ 

ಅವಮಾನಿಸಿ ಕಡೆಗಣಿಸುವರು, 

ಬರೀ ಮಾಂಸಗಳ ಮುದ್ದೆಯ ಅಂದವ 

ಕರಗುವ ಆಸ್ತಿಯಬಯಸಿ ಭಾವನೆ ಕೊಲ್ಲುವರು..! 


ಹಾಡಿ ಹೊಗಳಿ ನಿಮಿಷದ ಹರುಷವಾ 

ನೀಡುವವವನ ನಂಬುವರು, 

ಮೌನವಾಗಿಯೇ ಮನದಲಿ ಮೂರುತಿಯಾಗಿರಿಸಿ

ಪೂಜಿಸಿ ಆರಾಧಿಸುವ ನಿಜ ಪ್ರೀತಿಯ ಪ್ರಿಯಕರನ ಪ್ರೀತಿಯ ಕೊನೆವರೆಗೂ ಅರ್ಥ ಮಾಡಿಕೊಳ್ಳಲಾರದ ಹುಡುಗಿಯರಿಹರು..! 

 




Comments

Popular posts from this blog

ಭಾವಕುಸುಮೆ ನನ್ನವ್ವ..🥺❤

ಹೇ! ಹುಡುಗಿ ನೀ ಹೀಗೆ ಕಾಡದಿರು!🤗