Posts

Image
QUIZ COMPITITION:   A quiz competition is a special assessment conducted by the school, colleges, public or private organisations, businesses, or even individuals to check the participants' general knowledge about a particular subject or different subjects.   If a team buzzes in and cannot answer or answers incorrectly, the question is then posed to the other team. If neither team gives a correct answer, the host moves on to another question. This continues until a correct answer is given and one team is declared the winner. There are no point deductions for wrong answers.     IMPORTANCE OF QUIZ IN SCHOOL OR COLLEGES:     Besides quizzes can be conducted for different age groups and over varying cultures Quizzes improve or expanding one’s knowledge of things, either general or in specific area Quizzes are designed to promote, a fun way to study and in the process help improve one’s general knowledge Quiz competitions enables students to think from different...

ICT IN EDUCATION

Image
Introduction:  ICT, or information and communications technology (or technologies), is the infrastructure and components that enable modern age. Among the goals of IC technologies, tools and systems is to improve the way humans create, process and share data or information with each other. Definition of ICT in education: Information and Communication Technology, or ICT classroom, integrates digital technologies to enhance learning and teaching processes. Its rise has transformed education significantly by providing access to vast resources, interactive learning platforms, and personalized learning experiences. Components of ICT in education  Devices (hardware). Software. Data. Wired networks. Wireless networks. Communication technologies. The cloud. Importance of ICT in education: 1.Accurate and speedy processing of information:  2.Globalization:  3.Effective communication:  4.Entertainment:  5.Communicating news:  6.Advancement of econom...

ಬೇ ಅವ್ವ.. 🥺❤

 ನಿನ್ನ ಋಣ ತೀರಿಸೋಕೆ ಸಾಧ್ಯ ಅದ ಅನ್ಕೊಂಡಿ ಏನ್ ಬೇ..!  ಹೆಂಗರ ತಿಳ್ಕೊಂಡಿ ಬೇ ಯವ್ವ ಸಮುದ್ರದ ನೀರು ಖಾಲಿ ಆಗುತ್ತೇನು?  ನೀಲಿ ಆಕಾಶನ ಮಡಚೋಕೆ ಆಗತ್ತೇನು?   ಭೂಮಿ ತಾಯಿ ತಾಳ್ಮೆ ಮೀರಿಸೋಕೆ ಸಾದ್ಯ ಏನು?  ಅದೆಲ್ಲ ಸಾಧ್ಯ  ಅಂದ ಮ್ಯಾಲ ಅವೆರಡಕ್ಕೂ ಮಿಗಿಲಾದ ಪ್ರೀತಿ ಕೊಟ್ಟು,  ಚಿಕ್ಕವ ಇದ್ದಾಗ ಕೈ ತುತ್ತು ಕೊಟ್ಟು,  ಇಡೀ ಜೀವನಕ್ಕೆ ಆಗುವಷ್ಟು ನೆನಪು ಕೊಟ್ಟು ನನ್ನ ಬಿಟ್ಟು ಹೋದರೂ ನನ್ನ ಜೊತೆ ಇರುವ ನಿನ್ನ ಋಣ ತೀರಿಸೋಕೆ ಹೆಂಗ್ ಸಾಧ್ಯ ಬೇ..! 🥺❤

ನನ್ನವಳ ಸಿಹಿ ಸದ್ದು..

 ಮಾರ್ದನಿಯನೇ ಮೀರಿಸುವಂತಹ ಗೆಜ್ಜೆ ಸದ್ದು ಅವಳದು,  ನನ್ನೆದೆಯೇ ಭಾರವಾಗಿಬಿಡುವಂತೆ ಹೃದಯದ ಮೇಲೆ ತುಸು ಸದ್ದು ಮಾಡಿದೆ.😍 ♡♡ ಒಲವಿನ ಓಲೆಯ ಕಣ್ಣ ಸನ್ನೆಯಲೇ ಗೀಚಿ ಕಳಿಸುವ ನೋಟ ಅವಳದು,  ಪ್ರೀತಿಯ ಪರವಾನಿಗೆ ಪಡೆಯದೇ ನನ್ನೆದೆಯ ಲೂಟಿ ಮಾಡಿ ಜನವನೆ ಮರೆಸಿದೆ😻 ♡♡ ಮನದ ಗೌಣವನ್ನೇ ಕ್ಷಣ ಮಾತ್ರದಲ್ಲೇ ಮರೆಸುವ ಮಾಯಾವಿ ನಗು ಅವಳದು ಬರೀ ನೋವಿನ ಚಿಂತೆ ಕಂತೆಗಳೇ ತುಂಬಿದ ಖಾಲಿ ಹಾಳೆಯಂತಿದ್ದ ನನ್ನ ಲೋಕಕ್ಕೆ  ನಗುವಿನ ಚಿತ್ತಾರಗಳನೇ ಖುಷಿ ತಂದಿದೆ.. !❤😊

ಪ್ರೇಮ ನಿವೇದನೆ..❤🙈

 ಎದೆಯೊಳಗೆ ಸದ್ದಿಲ್ಲದೆ ಸೇರಿದ ಶಬ್ದ ನೀನು,  ನನ್ನುಸಿರಿಗೆ ಹೆಸರಿಟ್ಟ ಹೃದಯ ಬಡಿತ ನೀನು,  ನನ್ನ ಒಲವಿನ ಕನಸಿಗೆ ರುವಾರಿಯು ನೀನು,  ನಿನ್ನ ಧ್ವನಿಯ ಸಿಹಿ ಸದ್ದನು ಆಲಿಸುವ ಕೇಳುಗ ನಾನು..  ಸದಾ ನಿನ್ನ ಕಂಗಳಲೆ ಸೆರೆಯಾಗಬಯಸುವೆ ನಾನು,  ನಿನ್ನ ಕಣ್ಣ ಕಾಡಿಗೆಗೂ ಹಕ್ಕಿಲ್ಲ ಸ್ಪರ್ಶಿಸಲು ನಿನ್ನನು,  ನಿನ್ನ ಕಿರು ನಗೆಯಲೆ ಕಾಣೆಯಾಗುವ ಭಾವುಕ ನಾನು ನಿನ್ನ ಸಿಂಧೂರವೇ ನನ್ನ  ನೆರಳಾಗಿ ನಿನ್ನ ಸೇರಬೇಕಿದೆ ಇನ್ನೂ..  ಪ್ರೀತಿಯ ಪರವಾನಿಗೆ ಪಡೆಯಲು ನಿಂತ ನಿನ್ನ ಒಲವ ಆಶಿಸುವ ಆಕಾಂಕ್ಷಿ ನಾನು,  ನನ್ನೊಲುಮೆಯ ಸ್ವೀಕರಿಸಿ ಸಹಕರಿಸಿ ನನ್ನ ಪ್ರೀತಿಗೆ ಚಾಲನೆ ನೀಡಬೇಕಿದೆ ನೀನು..  ಪ್ರೀತಿಯ ಪಯಣದಲ್ಲಿ ನಿನ್ನ ಕೈ ಹಿಡಿದು  ಜೊತೆಯಾಗಬಯಸುವೆ ನಾನು,  ಅಂತಿಮ ಕ್ಷಣದವರೆಗೂ, ಹೃದಯದ ಕೊನೆ ಬಡಿತದವರೆಗೂ  ನಿನ್ನ ಜೊತೆಯಾಗಿ ಹೆಜ್ಜೆ ಹಾಕುವೆಯಾ ನೀನು... ನನ್ನ ಮನದೊಡತಿಯಾಗಿ ಬಂದರೆ ನೀನು ನಮ್ಮನೆಯ ನಂದಾದೀಪವಾಗಿಸುವೆ ನಿನ್ನನು ನನ್ನ ಪ್ರೇಮ ನಿವೇದನೆಗೆ ಒಮ್ಮೆ ಹೂಂಗುಟ್ಟಿದರೆ ನೀನು ನನ್ನ ಸಂತೋಷಕ್ಕೆ ಮಿತಿ ಎಲ್ಲಿದೆ ಸ್ವರ್ಗಕ್ಕೆ ಮೂರೇ ಗೇಣು.. ❤🙈

ಈ ದಿನದ ಕುರಿತು ಹೇಳಲೇ ಬೇಕಿದೆ..🥺😔

 ನನ್ನ ತಾಯಿಗೆ ಏನು ಆಗುವುದಿಲ್ಲ ಎಂದು ನಾ ನಂಬಿ  ಪರೀಕ್ಷೆ ಬರೆಯಲು ಅಮ್ಮನ ಬಿಟ್ಟು ಹೋದ 2ನೇ ದಿನ ನನಗೆ ಒಂದೇ ಒಂದು phone call ನೋವಿನ ನಿಜವಾದ ಅರ್ಥವನ್ನು ನನಗೆ ಇಡಿಯಾಗಿ ಮನಸಾರೆ ಅಳಿಸಿ ಹೋದ ಬಹು ಕರಾಳ ದಿನ...  ಇಂದು ನನ್ನ ಪಾಲಿನ ಅತೀ ಕ್ರೂರಿ ದಿನ,  ನನ್ನನು ಈ ಧರೆಗೆ ಪರಿಚಯಿಸಿದವಳೇ ನನ್ನನು ಒಂಟಿ ಮಾಡಿ ಭುವಿಯ ತೊರೆದ ದಿನ ನನಗೆ ನಗುವುದನ್ನು ಕಲಿಸಿ ಕೊಟ್ಟವಳೆ ನನ್ನ ನಗುವನ್ನು ಕಸಿದು ಹೋದಂತಹ ದಿನ,  ಇಂದು ನನ್ನ ಪಾಲಿನ ಅಂಧಕಾರ ದಿನ ನನ್ನ ಬದುಕಲಿ ಬೆಳಕ ತುಂಬಿದ ಜೀವವೇ ಹೇಳದೆ ಕೇಳದೆ ನನ್ನನು ಕತ್ತಲೆಗೆ ನೂಕಿದ ದಿನ ಜೀವನದ ಸರಿ ಪಾಠವಾ ಹೇಳಿಕೊಟ್ಟವಳೆ ತನ್ನ ಜೀವನವ ಬಹು ಬೇಗ ಮುಗಿಸಿದ ದಿನ..  ಇಂದು ನನ್ನ ಪಾಲಿನ ಕರಾಳ ದಿನ ನನ್ನ ಹೆತ್ತು ಹೊತ್ತು ಬೆಳೆಸಿದ ಹೆತ್ತ ಕರುಳೇ ನನಗೆ ಇಷ್ಟವಿಲ್ಲದ ವಿದಾಯ ಹೇಳಿದ ದಿನ,  ಕಣ್ಣೀರು ಹಾಕಬಾರದು ಎಂದು ಹೇಳಿದವಳೇ ನನ್ನ ಕಣ್ಣೀರಿನ ಕಾರಣವಾಗಿ ತೊರೆದ ದಿನ..  ಇಂದು ಎಂದಿಗೂ ಮರೆಯಲಾಗದ ಕೆಟ್ಟ ದಿನ ಚಿಕ್ಕಂದಿನಲ್ಲಿ ಲಾಲಿ ಹಾಡಿ ಮಲಗಿಸಿದವಳೇ ಚಿರ ನಿದ್ರೆಗೆ ಜಾರಿ ನನ್ನ ನಿದ್ದೆ ಕಸಿದ ಕೆಟ್ಟ ದಿನ ಇಂದಿಗೆ ಅವಳು ದೂರವಾಗಿ ವರುಷ ಕಳೆದಿದೆ ಅವಳ ಪ್ರೀತಿ ಪ್ರೇಮ ಕೊನೆಗೆ ನೆನಪಾಗಿ ಉಳಿದಿದೆ.. 🥺❤                               ~...

ಭಾವ ಮಾತಾದಾಗ.. 💜

ಅರೆ ಏನಾಗಿದೆ ನನಗೆ ಈಗೀಗ ಮನದೊಳಗಿನ ಭಾವಗಳದ್ದೇ ವೇಗ,  ಅವಳನ್ನು ಒಮ್ಮೆ ನೆನೆದರೆ ಬಾವೋದ್ವೇಗ ಸದಾ ಅವಳ ಹಾಜರಿಗೆ ಸೀಮಿತ ನನ್ನೆದೆಯ ಜಾಗ..  ನನಗೂ ತಿಳಿದಿದೆ ಅವಳ ನಗು ನನಗೆ ಅರ್ಪಿತ ಅವಳ ಕಣ್ಣೋಟದ ಸನ್ನೆಗಳೇ ಪ್ರೀತಿಗೆ ಮುನ್ಸೂಚಿತ,  ಆದರೂ ಕಾಯಬೇಕಿದೆ ಅವಳ ಒಪ್ಪಿಗೆಯ ಹರಸುತ ಮುಪ್ಪಿನವರೆಗೂ ಕಾಯಬಲ್ಲೆ ಅವಳೊಪ್ಪಿಗೆಗೆ ಕಾಯುತ..  ಅಯ್ಯೋ! ಅದೇನೋ ತಿಳಿಯದ ಸಂತಸ ಅವಳಿದ್ದರೆ ಅದೇನೋ ತಿಳಿಯದ ಕಾತರ ಅವಳು ಕೊಂಚ ದೂರವಾದರೆ,  ಪ್ರೀತಿ ಎನಲೆ ಇದನ ಹುಚ್ಚು ಮನಸಿನ ಭಾವ ಎನಲೆ ಅದೇನೇ ಹೇಳಿದರೂ ಅವಳೇ ನನ್ನ ಬಾಳ ಬೆಳಗುವ ಕೋಮಲೆ..  ಅವಳಲ್ಲಿ ಏನೋ ಅಗಾಧ ಶಕ್ತಿಯಿದೆ ನನ್ನನ್ನೇ ಕಟ್ಟಿ ಹಾಕುವಷ್ಟು ಮೋಡಿ ಮಾಡುವ ದೈವಕನ್ಯಯವಳು ಬಲು ಸುಂದರ ಹೂವಿನಷ್ಟು,  ಅವಳ ನಗುವಿನಲಿ ಅದೇನೋ ಕಾಣದ ಸೆಳೆತ ನನ್ನ ಸೆಳೆಯುವಷ್ಟು ಕೊನೆವರೆಗೂ ಅವಳ ಪ್ರೀತಿಸಿಬಿಡಲೇ ಯಾರು ಸಹಾ ಪ್ರೀತಿಸದಷ್ಟು..!