Posts

Showing posts from August, 2023

ಭಾವ ಮಾತಾದಾಗ.. 💜

ಅರೆ ಏನಾಗಿದೆ ನನಗೆ ಈಗೀಗ ಮನದೊಳಗಿನ ಭಾವಗಳದ್ದೇ ವೇಗ,  ಅವಳನ್ನು ಒಮ್ಮೆ ನೆನೆದರೆ ಬಾವೋದ್ವೇಗ ಸದಾ ಅವಳ ಹಾಜರಿಗೆ ಸೀಮಿತ ನನ್ನೆದೆಯ ಜಾಗ..  ನನಗೂ ತಿಳಿದಿದೆ ಅವಳ ನಗು ನನಗೆ ಅರ್ಪಿತ ಅವಳ ಕಣ್ಣೋಟದ ಸನ್ನೆಗಳೇ ಪ್ರೀತಿಗೆ ಮುನ್ಸೂಚಿತ,  ಆದರೂ ಕಾಯಬೇಕಿದೆ ಅವಳ ಒಪ್ಪಿಗೆಯ ಹರಸುತ ಮುಪ್ಪಿನವರೆಗೂ ಕಾಯಬಲ್ಲೆ ಅವಳೊಪ್ಪಿಗೆಗೆ ಕಾಯುತ..  ಅಯ್ಯೋ! ಅದೇನೋ ತಿಳಿಯದ ಸಂತಸ ಅವಳಿದ್ದರೆ ಅದೇನೋ ತಿಳಿಯದ ಕಾತರ ಅವಳು ಕೊಂಚ ದೂರವಾದರೆ,  ಪ್ರೀತಿ ಎನಲೆ ಇದನ ಹುಚ್ಚು ಮನಸಿನ ಭಾವ ಎನಲೆ ಅದೇನೇ ಹೇಳಿದರೂ ಅವಳೇ ನನ್ನ ಬಾಳ ಬೆಳಗುವ ಕೋಮಲೆ..  ಅವಳಲ್ಲಿ ಏನೋ ಅಗಾಧ ಶಕ್ತಿಯಿದೆ ನನ್ನನ್ನೇ ಕಟ್ಟಿ ಹಾಕುವಷ್ಟು ಮೋಡಿ ಮಾಡುವ ದೈವಕನ್ಯಯವಳು ಬಲು ಸುಂದರ ಹೂವಿನಷ್ಟು,  ಅವಳ ನಗುವಿನಲಿ ಅದೇನೋ ಕಾಣದ ಸೆಳೆತ ನನ್ನ ಸೆಳೆಯುವಷ್ಟು ಕೊನೆವರೆಗೂ ಅವಳ ಪ್ರೀತಿಸಿಬಿಡಲೇ ಯಾರು ಸಹಾ ಪ್ರೀತಿಸದಷ್ಟು..! 

ಭಾವನೆ ಅರಿಯದ ಬೆಡಗಿಯರು.. 😌

ಮನದ ಆಸೆಗಳೇನೋ ಸಾವಿರಾರು ಆದರೆ ನನಗೆ ಗತಿಯಾಗಿದೆ ಸಖಿ ಸಿಗದ ಊರು ಭವದ ಭಾವನೆಗಳು ಚಿಮ್ಮುತಿವೆ ನೂರು ಆದರೆ ನನಗೆ ಸಿಕ್ಕಿದ್ದು ಸಖಿ ಸಿಗದ ಊರು,  ಅರೆ ಯಾಕೆ ಹೀಗೆ ಈ ಹುಡುಗಿಯರು ಅವರಿಗಾಗಿ ಕಾದವರಿಗೆ ಎಂದಿಗೂ ಸಿಗರು,  ಬಣ್ಣ ಬಣ್ಣದ ಮಾತುಗಳಿಗೆ ಮಾತ್ರ ಒಂದವಕಾಶ ನೀಡಿ ಸೋತು ಹೋಗುವರು..!  ಮುಗುಳುನಗೆಯ ಮೌನದ ಸಂಭಾಷಣೆ  ಮನದ ಒಳಗಿನ ಪ್ರೀತಿಯ ಅರಿಯರು,  ಬದಲಿಗೆ ಆನ್ಲೈನ್ ಸಂದೇಶಗಳ  ಪ್ರೀತಿಗೆ ಬಲು ಬೇಗ ಆಕರ್ಷಿತರಾಗುವರು..!  ಮನದ ಒಳಗಿನ ಒಲುಮೆಯ ಮಾತುಗಳ  ಅವಮಾನಿಸಿ ಕಡೆಗಣಿಸುವರು,  ಬರೀ ಮಾಂಸಗಳ ಮುದ್ದೆಯ ಅಂದವ  ಕರಗುವ ಆಸ್ತಿಯಬಯಸಿ ಭಾವನೆ ಕೊಲ್ಲುವರು..!  ಹಾಡಿ ಹೊಗಳಿ ನಿಮಿಷದ ಹರುಷವಾ  ನೀಡುವವವನ ನಂಬುವರು,  ಮೌನವಾಗಿಯೇ ಮನದಲಿ ಮೂರುತಿಯಾಗಿರಿಸಿ ಪೂಜಿಸಿ ಆರಾಧಿಸುವ ನಿಜ ಪ್ರೀತಿಯ ಪ್ರಿಯಕರನ ಪ್ರೀತಿಯ ಕೊನೆವರೆಗೂ ಅರ್ಥ ಮಾಡಿಕೊಳ್ಳಲಾರದ ಹುಡುಗಿಯರಿಹರು..!