ಪ್ರೇಮ ನಿವೇದನೆ..❤🙈
ಎದೆಯೊಳಗೆ ಸದ್ದಿಲ್ಲದೆ ಸೇರಿದ ಶಬ್ದ ನೀನು, ನನ್ನುಸಿರಿಗೆ ಹೆಸರಿಟ್ಟ ಹೃದಯ ಬಡಿತ ನೀನು, ನನ್ನ ಒಲವಿನ ಕನಸಿಗೆ ರುವಾರಿಯು ನೀನು, ನಿನ್ನ ಧ್ವನಿಯ ಸಿಹಿ ಸದ್ದನು ಆಲಿಸುವ ಕೇಳುಗ ನಾನು.. ಸದಾ ನಿನ್ನ ಕಂಗಳಲೆ ಸೆರೆಯಾಗಬಯಸುವೆ ನಾನು, ನಿನ್ನ ಕಣ್ಣ ಕಾಡಿಗೆಗೂ ಹಕ್ಕಿಲ್ಲ ಸ್ಪರ್ಶಿಸಲು ನಿನ್ನನು, ನಿನ್ನ ಕಿರು ನಗೆಯಲೆ ಕಾಣೆಯಾಗುವ ಭಾವುಕ ನಾನು ನಿನ್ನ ಸಿಂಧೂರವೇ ನನ್ನ ನೆರಳಾಗಿ ನಿನ್ನ ಸೇರಬೇಕಿದೆ ಇನ್ನೂ.. ಪ್ರೀತಿಯ ಪರವಾನಿಗೆ ಪಡೆಯಲು ನಿಂತ ನಿನ್ನ ಒಲವ ಆಶಿಸುವ ಆಕಾಂಕ್ಷಿ ನಾನು, ನನ್ನೊಲುಮೆಯ ಸ್ವೀಕರಿಸಿ ಸಹಕರಿಸಿ ನನ್ನ ಪ್ರೀತಿಗೆ ಚಾಲನೆ ನೀಡಬೇಕಿದೆ ನೀನು.. ಪ್ರೀತಿಯ ಪಯಣದಲ್ಲಿ ನಿನ್ನ ಕೈ ಹಿಡಿದು ಜೊತೆಯಾಗಬಯಸುವೆ ನಾನು, ಅಂತಿಮ ಕ್ಷಣದವರೆಗೂ, ಹೃದಯದ ಕೊನೆ ಬಡಿತದವರೆಗೂ ನಿನ್ನ ಜೊತೆಯಾಗಿ ಹೆಜ್ಜೆ ಹಾಕುವೆಯಾ ನೀನು... ನನ್ನ ಮನದೊಡತಿಯಾಗಿ ಬಂದರೆ ನೀನು ನಮ್ಮನೆಯ ನಂದಾದೀಪವಾಗಿಸುವೆ ನಿನ್ನನು ನನ್ನ ಪ್ರೇಮ ನಿವೇದನೆಗೆ ಒಮ್ಮೆ ಹೂಂಗುಟ್ಟಿದರೆ ನೀನು ನನ್ನ ಸಂತೋಷಕ್ಕೆ ಮಿತಿ ಎಲ್ಲಿದೆ ಸ್ವರ್ಗಕ್ಕೆ ಮೂರೇ ಗೇಣು.. ❤🙈