Posts

Showing posts from July, 2023

ಪ್ರೀತಿಯ ಪರವಶ..❤

 ಕರಗಿ ಹೋದೆ ನಾನು ಒಮ್ಮೆಲೇ ನಿನ್ನಂದವ ನೋಡಲು,  ನೀ ಒಮ್ಮೆ ನನ್ನೆಡೆ ಬಂದರೆ ಆಸೆಯಿದೆ ನಿನ್ನ ಮಡಿಲಲ್ಲಿ ಮಲಗಲು..  ಒಮ್ಮೆ ಮಾತಾಡುವೆಯ ಓ ಕೋಮಲೆ,  ಕೊನೆವರೆಗೂ ನಿನ್ನ ಮಾತಿನ ಕೇಳುಗನಾಗುವೆ,  ನಿನ್ನ ಕಾಲ್ಗೆಜ್ಜೆಯ ಸಿಹಿ ಶಬ್ದವ ಕೇಳಲೆಂದೇ, ನನ್ನ ಕಿವಿಗಳು ಕಾಯುತ್ತಾ ಕುಳಿತಿವೆ..  ಮೈ ಮರೆತೆನು ನಾ ನನ್ನಲೆ ನೀ ನನ್ನ ತಿರುಗಿ ನೋಡಲು,  ಒಮ್ಮೆ ಹೇಳಿಬಿಡು ನೀ ಪ್ರೀತಿಯ ಕಣ್ಣಲೆ,  ಜಗವನ್ನೇ ತೊರೆಯುವೆ ನಾ ನಿನ್ನನ್ನು ಪಡೆಯಲು... ❤

ಹೇ! ಹುಡುಗಿ ನೀ ಹೀಗೆ ಕಾಡದಿರು!🤗

 ಹೇ! ಹುಡುಗಿ ನೀ ಹೀಗೆ ಕಾಡದಿರು,  ನೀ ಮುಂಗುರುಳ ಸರಿಸಿ ನನ್ನನ್ನು ಬಂಧಿಸಿಬಿಡು ಆಗಲಾದರೂ ನಿನ್ನ ಮುಂಗುರುಳ  ಬಂಧನದಲ್ಲಿ ಬೆಚ್ಚಗಿರುವೆ.. !  ಹೇ! ಹುಡುಗಿ ನೀ ಹೀಗೆ  ಕಾಡದಿರು,  ನಿನ್ನ ಮೂಗಿನ ಮೂಗುತಿಯ ಮೇಲೆಯೇ ನನಗೂ ಜಾಗ ಕೊಡು ಸಂತಸದಿ ನಿನ್ನಂದವನ್ನೇ ಬಲು ಸೋಜಿಗವಾಗಿ ಗಮನಿಸುತ ನಿನ್ನಂದವ ಕಾಯುವೆ... !  ಹೇ! ಹುಡುಗಿ ನೀ ಹೀಗೆ ಕಾಡದಿರು,  ನಿನ್ನ ಕೆಂದುಟಿಗಳನ್ನು ಒಮ್ಮೆ ಅರಳಿಸಿ ದಾಳಿಂಬೆಯ ಹಲ್ಲುಗಳ ತೋರಿಬಿಡು ಸದಾ ನಿನ್ನ ನಲ್ಮೆಯ ಕಿರು ನಗೆಯನು ನೋಡುತಲೆ ಇಡೀ ಜೀವನ ಸವೆಸಿಬಿಡುವೆ..!  Mahadev nayak

ಭಾವಕುಸುಮೆ ನನ್ನವ್ವ..🥺❤

ಭಾವಕುಸುಮೆ ನನ್ನಮ್ಮ.. ❤🥺 ನನ್ನ ನಗುವ ನೋಡಲು ತನ್ನ ಇಡೀ ಜೀವನವನ್ನೇ ಸವೆಸಿದವಳು,  ನನ್ನನ್ನು ಈ ಭುವಿಗೆ ತರಲು ನರಕಾಯತನೆಯ ನಗುತ್ತಾ ಸ್ವೀಕರಿಸಿದವಳು,  ಅಪ್ಪನ ಕೋಪಕ್ಕೆ ತುತ್ತಾಗುವುದನ್ನು  ಅದೆಷ್ಟೊ ಭಾರಿ ತಪ್ಪಿಸಿ ಪ್ರೀತಿ ತೋರಿದವಳು, ನೋವೆಲ್ಲಾ ತನಗೆ ಮಾತ್ರ ಇರಲೆಂದು ನನ್ನ ಮಗುವು ನಗುತಿರಲೆಂದು ಆಶಿಸುವವಳು ತನ್ನ ಮಗುವಿನ ಹೊಟ್ಟೆ ತುಂಬಲೆಂದು ಲೆಕ್ಕವಿಲ್ಲದಷ್ಟು ಭಾರಿ ನೀರು ಕುಡಿದೇ ಉಪವಾಸ ಮಲಗಿದವಳು,  ಮಗನು ಮದುವೆಯ ನಂತರ ಅವಳನ್ನೇ ಹೊರ ಹಾಕಲು ಹೊರ ಜಗತ್ತಿಗೆ ಅವನ ಬಗೆಗೆ ಒಳ್ಳೆಯದನ್ನೇ ಹೇಳಿ ಹರಸಿದವಳು....