ನನ್ನವಳ ಸಿಹಿ ಸದ್ದು..

 ಮಾರ್ದನಿಯನೇ ಮೀರಿಸುವಂತಹ

ಗೆಜ್ಜೆ ಸದ್ದು ಅವಳದು, 

ನನ್ನೆದೆಯೇ ಭಾರವಾಗಿಬಿಡುವಂತೆ

ಹೃದಯದ ಮೇಲೆ ತುಸು ಸದ್ದು ಮಾಡಿದೆ.😍

♡♡

ಒಲವಿನ ಓಲೆಯ ಕಣ್ಣ ಸನ್ನೆಯಲೇ

ಗೀಚಿ ಕಳಿಸುವ ನೋಟ ಅವಳದು, 

ಪ್ರೀತಿಯ ಪರವಾನಿಗೆ ಪಡೆಯದೇ

ನನ್ನೆದೆಯ ಲೂಟಿ ಮಾಡಿ ಜನವನೆ ಮರೆಸಿದೆ😻

♡♡

ಮನದ ಗೌಣವನ್ನೇ ಕ್ಷಣ ಮಾತ್ರದಲ್ಲೇ

ಮರೆಸುವ ಮಾಯಾವಿ ನಗು ಅವಳದು

ಬರೀ ನೋವಿನ ಚಿಂತೆ ಕಂತೆಗಳೇ ತುಂಬಿದ

ಖಾಲಿ ಹಾಳೆಯಂತಿದ್ದ ನನ್ನ ಲೋಕಕ್ಕೆ 

ನಗುವಿನ ಚಿತ್ತಾರಗಳನೇ ಖುಷಿ ತಂದಿದೆ.. !❤😊

Comments

Popular posts from this blog

ಭಾವಕುಸುಮೆ ನನ್ನವ್ವ..🥺❤

ಹೇ! ಹುಡುಗಿ ನೀ ಹೀಗೆ ಕಾಡದಿರು!🤗

ಭಾವನೆ ಅರಿಯದ ಬೆಡಗಿಯರು.. 😌