ಭಾವ ಮಾತಾದಾಗ.. 💜

ಅರೆ ಏನಾಗಿದೆ ನನಗೆ ಈಗೀಗ

ಮನದೊಳಗಿನ ಭಾವಗಳದ್ದೇ ವೇಗ, 

ಅವಳನ್ನು ಒಮ್ಮೆ ನೆನೆದರೆ ಬಾವೋದ್ವೇಗ

ಸದಾ ಅವಳ ಹಾಜರಿಗೆ ಸೀಮಿತ ನನ್ನೆದೆಯ ಜಾಗ.. 


ನನಗೂ ತಿಳಿದಿದೆ ಅವಳ ನಗು ನನಗೆ ಅರ್ಪಿತ

ಅವಳ ಕಣ್ಣೋಟದ ಸನ್ನೆಗಳೇ ಪ್ರೀತಿಗೆ ಮುನ್ಸೂಚಿತ, 

ಆದರೂ ಕಾಯಬೇಕಿದೆ ಅವಳ ಒಪ್ಪಿಗೆಯ ಹರಸುತ

ಮುಪ್ಪಿನವರೆಗೂ ಕಾಯಬಲ್ಲೆ ಅವಳೊಪ್ಪಿಗೆಗೆ ಕಾಯುತ.. 


ಅಯ್ಯೋ! ಅದೇನೋ ತಿಳಿಯದ ಸಂತಸ ಅವಳಿದ್ದರೆ

ಅದೇನೋ ತಿಳಿಯದ ಕಾತರ ಅವಳು ಕೊಂಚ ದೂರವಾದರೆ, 

ಪ್ರೀತಿ ಎನಲೆ ಇದನ ಹುಚ್ಚು ಮನಸಿನ ಭಾವ ಎನಲೆ

ಅದೇನೇ ಹೇಳಿದರೂ ಅವಳೇ ನನ್ನ ಬಾಳ ಬೆಳಗುವ ಕೋಮಲೆ.. 


ಅವಳಲ್ಲಿ ಏನೋ ಅಗಾಧ ಶಕ್ತಿಯಿದೆ ನನ್ನನ್ನೇ ಕಟ್ಟಿ ಹಾಕುವಷ್ಟು

ಮೋಡಿ ಮಾಡುವ ದೈವಕನ್ಯಯವಳು ಬಲು ಸುಂದರ ಹೂವಿನಷ್ಟು, 

ಅವಳ ನಗುವಿನಲಿ ಅದೇನೋ ಕಾಣದ ಸೆಳೆತ ನನ್ನ ಸೆಳೆಯುವಷ್ಟು

ಕೊನೆವರೆಗೂ ಅವಳ ಪ್ರೀತಿಸಿಬಿಡಲೇ ಯಾರು ಸಹಾ ಪ್ರೀತಿಸದಷ್ಟು..! 



Comments

Popular posts from this blog

ಭಾವಕುಸುಮೆ ನನ್ನವ್ವ..🥺❤

ಹೇ! ಹುಡುಗಿ ನೀ ಹೀಗೆ ಕಾಡದಿರು!🤗

ಭಾವನೆ ಅರಿಯದ ಬೆಡಗಿಯರು.. 😌